Sunday, August 15, 2010
Monday, July 19, 2010
Article on lord Basava in Hindhi newspaper
Chidananda Murthy writings on Lord Basava and his philosophy in Hindi Gaurav newspaper
http://www.hindigaurav.com/community-news-0-73
Lord Basavanna,founder of veerashaiva community.Basavanna became the revolutionary who taught that right conduct is heaven. He was a great Saint, free thinker, rationalist, revolutionist, philosopher and social reformer lived during the period 1134-1196 A.D., describing himself as the “HUMBLEST OF ALL”. He evolved “VISHWA MANAVA DHARMA”, a religious order based on humanism and scientific spirituality. He gave a new dimension to the life and living of mankind and the living world.
Basaveshwara propagated moral, ethical and spiritual values for a peaceful and purposeful life. Social Equality was the breath of Basava’s philosophy. His revolutionary reforming movement included basic principles like compassion, universal love, truth, equality, simplicity, Kayaka (Holiness of work) and Dasoha (Devine charity).
He declared that engaging in work is itself Heaven and taught the ideals of simple living and the equality between men and women. People called him Anna (Big brother) because he practiced what he preached.
Shree Basava (also known as Basaveshwara or Basavanna) brought on a social transformation, often referred as "revolution," in that he have been a mystic by temperament, an idealist by choice, a statesman by profession, a man of letters by taste, a humanis...
Basava Philosophy
Basava said that the roots of social life are embedded not in the cream of the society but in the scum of the society. It is his witty saying that the cow does not give milk to him who sits on its back, but it gives milk to him who squats at its feet. With his wide sympathy, he admitted high and low alike into his fold. The Anubhava Mantapa (12th century spiritual academy)established by Basava laid down the foundation of social democracy. Basava believed that man becomes great, not by his birth but by his worth to the society. This means faith in the dignity of man and the belief that a common man is as...
Lord Basava - Views on Basaveshwara today:
The Times of India in its issue dated May 17, 1918 paid a glowing tribute to Lord Basava: "It was the distinctive feature of his mission that while illustrious religious and social reformers in India before him had each laid his emphasis on one or other items of religion and social reform, either subordinating more or less other items to it or ignoring them altogether, Basava sketched and boldly tried to work out a large and comprehensive programme of social reform with the elevation and independence of womanhood as its guiding ...
Basavanna’s famous teaching
Do not steal, do not kill. Do not utter lies;
Do not glorify oneself; Do not blame others.
Do not lose temper; Do not detest others;
This alone is inside purity. This alone is outside purity;
And this alone is the way to please our Lord Kudalasangama.
Let them not say, O Lord
Whose is he? Whose, O whose?
Let them say rather, “He is ours,
He’s ours, He’s ours!”
O Lord Kudalasangama say that
He is the son of Thy own house.
- Lord Basaveshwara
-By Chidanand
http://www.hindigaurav.com/community-news-0-73
Lord Basavanna,founder of veerashaiva community.Basavanna became the revolutionary who taught that right conduct is heaven. He was a great Saint, free thinker, rationalist, revolutionist, philosopher and social reformer lived during the period 1134-1196 A.D., describing himself as the “HUMBLEST OF ALL”. He evolved “VISHWA MANAVA DHARMA”, a religious order based on humanism and scientific spirituality. He gave a new dimension to the life and living of mankind and the living world.
Basaveshwara propagated moral, ethical and spiritual values for a peaceful and purposeful life. Social Equality was the breath of Basava’s philosophy. His revolutionary reforming movement included basic principles like compassion, universal love, truth, equality, simplicity, Kayaka (Holiness of work) and Dasoha (Devine charity).
He declared that engaging in work is itself Heaven and taught the ideals of simple living and the equality between men and women. People called him Anna (Big brother) because he practiced what he preached.
Shree Basava (also known as Basaveshwara or Basavanna) brought on a social transformation, often referred as "revolution," in that he have been a mystic by temperament, an idealist by choice, a statesman by profession, a man of letters by taste, a humanis...
Basava Philosophy
Basava said that the roots of social life are embedded not in the cream of the society but in the scum of the society. It is his witty saying that the cow does not give milk to him who sits on its back, but it gives milk to him who squats at its feet. With his wide sympathy, he admitted high and low alike into his fold. The Anubhava Mantapa (12th century spiritual academy)established by Basava laid down the foundation of social democracy. Basava believed that man becomes great, not by his birth but by his worth to the society. This means faith in the dignity of man and the belief that a common man is as...
Lord Basava - Views on Basaveshwara today:
The Times of India in its issue dated May 17, 1918 paid a glowing tribute to Lord Basava: "It was the distinctive feature of his mission that while illustrious religious and social reformers in India before him had each laid his emphasis on one or other items of religion and social reform, either subordinating more or less other items to it or ignoring them altogether, Basava sketched and boldly tried to work out a large and comprehensive programme of social reform with the elevation and independence of womanhood as its guiding ...
Basavanna’s famous teaching
Do not steal, do not kill. Do not utter lies;
Do not glorify oneself; Do not blame others.
Do not lose temper; Do not detest others;
This alone is inside purity. This alone is outside purity;
And this alone is the way to please our Lord Kudalasangama.
Let them not say, O Lord
Whose is he? Whose, O whose?
Let them say rather, “He is ours,
He’s ours, He’s ours!”
O Lord Kudalasangama say that
He is the son of Thy own house.
- Lord Basaveshwara
-By Chidanand
Monday, May 24, 2010
Friday, May 21, 2010
ಕರ್ನಾಟಕದ ಶರಣರ ಮೇಲೆ ಆಂದ್ರದ ಆರಾಧ್ಯರ ಸವಾರಿ
ಇತ್ತೀಚೆಗೆ ಶಿವಯೋಗ ಮಂದಿರದಲ್ಲಿ ಈ ಶತಮಾನದ ಬಹುದೊಡ್ಡ ಯಶಸ್ಚಿ ಸಮಾರಂಭವೊಂದು ಜರುಗಿತು. ಇದರ ಫಲವಾಗಿ 'ಪ್ರಜಾವಾಣಿ' ಪತ್ರಿಕೆಯಲ್ಲಿ ಉದ್ಭವಿಸಿದ ಸಂವಾದದಲ್ಲಿ ಪಂಚಾಚಾರ್ಯರನ್ನು ವಿರೋಧಿಸಿ ಎಲ್ಲ ಸಮಾಜದ-ಸ್ತರದವರು ಬರೆದರೆ, ಅವರ ಪರವಾಗಿ ಬರೆದವರು ಕೇವಲ ವೀರಶೈವ ವಿದ್ವಾಂಸ ಜಂಗಮರೆಂಬುದು ಗಮನಿಸಬೇಕಾದ ಅಂಶವಾಗಿದೆ.12 ನೆಯ ಶತಮಾನದ ಶರಣ ಚಳುವಳಿಯೆಂಬ ಕುದಿಯುವ ಪಾತ್ರೆಯಲ್ಲಿ ಅನೇಕ ಮತ ಪಂಥಗಳು ಕರಗಿ ಹೋದವು. ಬಳಿಕ ಅದರ ಒಡಲಿನಿಂದ ಶರಣ ಸಿದ್ಧಾಂತದ ಪ್ರಸಾರಕ- ಪ್ರತಿನಿಧಿಗಳೆಂಬಂತೆ ಕರ್ನಾಟಕದ ಹಳ್ಳಿ - ಪಟ್ಟಣಗಳಲ್ಲಿ ಶರಣ ಜಂಗಮರು ತಲೆಯೆತ್ತಿ ನಿಂತರು. ಇಂದಿಗೂ ಅವರ ಮಠಗಳಲ್ಲಿರುವ ಕನ್ನಡ ಸಂಸ್ಕೃತ ತಾಳೆ ಗರಿಗ್ರಂಥ, ಕಾಗದ ಪತ್ರಗಳು 'ಶ್ರೀ ಗುರು ಬಸವಲಿಂಗಾಯ ನಮ:' ಎಂಬ ಒಕ್ಕಣಿಕೆಯಿಂದಲೇ ಆರಂಭವಾಗಿರುವುದು, ಷಡಕ್ಷರದೇವ, ಬಾಳೆಹಳ್ಳಿ ಪೀಠದ ಕುಮಾರ ಚೆನ್ನಬಸವ ಮೊದಲು ಮಾಡಿ ಎಲ್ಲ ಗುರು ವರ್ಗದ ಮಠಾಧೀಶರು ಹೆಚ್ಚಾಗಿ ಶರಣರನ್ನೇ ಕುರಿತು ಸಾಹಿತ್ಯ ಬರೆದುದು ಇದಕ್ಕೆ ನಿದರ್ಶನ.ಈ ಬಸವ ನಿಷ್ಠ ಧೋರಣೆ ಮುಂದುವರೆಯುತ್ತಿದ್ದಂತೆಯೇ ವಿಜಯನಗರ ಸಾಮ್ರಾಜ್ಯ ಸಂದರ್ಭದಲ್ಲಿ ಹಂಪಿ ನೆರೆಯ ಆಂದ್ರದ ಆರಾಧ್ಯ ಜಂಗಮರು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ಪ್ರವೇಶಿಸಿ, ಬಳಿಕ ವಿಜಯ ನಗರ ಮುಂದುವರಿಕೆಯಾದ ಕೆಳದಿ, ಮೈಸೂರು ರಾಜ್ಯಗಳಲ್ಲಿ ಶಾಶ್ವತ ನೆಲೆನಿಂತರು. ಇದರಿಂದಾಗಿ ನಮ್ಮ ನಾಡಿನಲ್ಲಿ ಶರಣ ಜಂಗಮರು, ಆರಾಧ್ಯ ಜಂಗಮರೆಂಬ ಎರಡು ಸಮಾಜಗಳು ಅಸ್ತಿತ್ವಕ್ಕೆ ಬಂದವು. ಇಬ್ಬರ ಎದೆಯ ಮೇಲೆ ಲಿಂಗವಿರುವುದು, ಇವೆರಡೂ ಪಕ್ಷಗಳು ಒಂದೇ ಎಂಬ ಭ್ರಮೆ ಹುಟ್ಟಿಸಿತು. ನಿಜಸ್ಥಿತಿಯೆಂದರೆ, ಶರಣ ಜಂಗಮರ ಎದೆಯ ಮೇಲಿನದು ತನ್ನೊಳಗಿನ ಆತ್ಮಲಿಂಗದ ಪ್ರತೀಕವಾದರೆ, ಆರಾಧ್ಯ ಜಂಗಮರ ಎದೆಯ ಮೇಲಿನದು ದೇವಾಲಯದೊಳಗಿನ ಸ್ಥಾವರಂಲಿಂಗದ ಸಣ್ಣ ಪ್ರತೀಕ. ಪ್ರವಾಸ ಪ್ರಸಂಗದಲ್ಲಿ ಮಾರ್ಗ ಮಧ್ಯದ ಪೂಜೆಗಾಗಿ ಅದನ್ನು ಕೊರಳಿಗೋ, ತೋಳಿಗೋ ಕಟ್ಟಿಕೊಂಡು ಹೋಗುತ್ತಿದ್ದ ಅವರು, ಪ್ರವಾಸ ಮುಗಿದೊಡನೆ ಬಿಚ್ಚಿ ಮತ್ತೆ ಮನೆಯ ಜಗುಲಿಯ ಮೇಲಿಡುತ್ತಿದ್ದರು. ಅಂದರೆ ಇವರಿಗೆ ಜನಿವಾರ ಕಡ್ಡಾಯ, ಲಿಂಗ ಐಚ್ಛಿಕವಾಗಿದ್ದಿತು.ಕರ್ನಾಟಕಕ್ಕೆ ಕಾಲಿಟ್ಟ ಇಂಥವರಲ್ಲಿ ಕೆಲವರು ಇಲ್ಲಿಯ ಶರಣ ಜಂಗಮರೊಂದಿಗೆ ಹೊಂದಿಕೊಂಡು ಬಾಳುವ ಸಲುವಾಗಿ ತಮ್ಮ ಕಡ್ಡಾಯ ಜನಿವಾರದ ಜೊತೆ ಐಚ್ಛಿಕ ಲಿಂಗವನ್ನೂ ಕಡ್ಡಾಯವಾಗಿ ಕಟ್ಟಿಕೊಂಡರೆ, ಮುಂದಿನ ದಿನಗಳಲ್ಲಿ ಇನ್ನೂ ಹೊಂದಿಕೊಂಡು ಬಾಳುವ ಸಲುವಾಗಿ ಜನಿವಾರ ತ್ಯೆಜಿಸಿ, ಎದೆಯ ಮೇಲೆ ಲಿಂಗವೊಂದನ್ನೇ ಉಳಿಸಿಕೊಂಡರು. ಇಂಥ ಎರಡೂ ಬಗೆಯ ಆರಾಧ್ಯ ಜಂಗಮರು (ಇವರ ಮನೆಯಲ್ಲಿ ತೆಲಗು ಜೀವಂತವಿದೆ) ಮೈಸೂರು ಪ್ರದೇಶದಲ್ಲಿ ಈಗಲೂ ಇದ್ದಾರೆ. ಇವರಲ್ಲಿ ಲಿಂಗವನ್ನು ಮಾತ್ರ ಉಳಿಸಿಕೊಂಡ ಆರಾಧ್ಯ ಜಂಗಮರು ತಮ್ಮ ಸಂಪ್ರದಾಯಿಕ ವೇದಘೋಷ, ಹೋಮ ಹವನ, ಸಂಸ್ಕೃತ ಧರ್ಮ ಗ್ರಂಥ, ಪರಂಪರೆಯ ಸುಳ್ಳು ಪ್ರಾಚೀನತೆ ಇತ್ಯಾದಿಗಳನ್ನು ಮುಂದೊಡ್ಡಿ, ಶರಣ ಜಂಗಮರಲ್ಲಿ ಹುಸಿಪ್ರತಿಷ್ಠೆಯ ಭ್ರಮೆ ಹುಟ್ಟಿಸಿದರು. 12ನೆಯ ಶತಮಾನದಲ್ಲಿ ಕಳೆದುಕೊಂಡಿದ್ದ ನಕುಲೀಶ, ಪಾಶುಪತ, ಮಹಾವ್ರತಿ, ಶುದ್ಧಶೈವಗಳೆಂಬ ನಾಲ್ಕುಶೈವಗಳ ಮರುಹುಟ್ಟು ಎಂಬಂತೆ ಹೊಸದಾಗಿ ನಾಲ್ಕು ಆಚಾರ್ಯ ಪೀಠಗಳನ್ನು ಕಲ್ಪಿಸಿ, ಶರಣ ಜಂಗಮರ ಮಠಗಳನ್ನು ಹಂಚಿಕೊಂಡು ಹೊಸಬಗೆಯ ಮಠೀಯ ವ್ಯವಸ್ಥೆಯನ್ನು ರೂಢಿಸಿದರು.ಇವರು ಕಲ್ಪಿಸಿದ ರೇಣುಕಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ 'ಲಿಂಗಯಜ್ಞೋಪವೀತಿನೇ ನಮ:' ಎಂಬ, ಮರುಳಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ 'ಶಿಖಾಯಜ್ಞೋಪವೀತಿನೇ ನಮ:' ಎಂಬ ವಾಕ್ಯಗಳನ್ನು ನೋಡಿದರೆ ಯಜ್ಞೋಪವೀತ, ಲಿಂಗ, ಜುಟ್ಟು ಮನ್ನಿಸುವ ಇವರಿಗೂ ಕೇವಲ ಇಷ್ಟಲಿಂಗಧಾರಿಗಳಾದ ಶರಣ ಜಂಗಮರಿಗೂ ಸಂಬಂಧವಿಲ್ಲವೆಂದು ಸ್ಪಷ್ಟವಾಗುತ್ತದೆ.1606ರ ಗುಮ್ಮಳಾಪುರ ಶಾಸನವು 'ಭಾರದ್ವಾಜ ಗೋತ್ರದ ಪಡಿವಿಡಿ ವರ್ಗದ ಕೊಲ್ಲಿಪಾಕೆ ರೇವಣ ಸಿದ್ಧೇಶ್ವರ ಸಂಪ್ರದಾಯದವರಾದ ಗುಮ್ಮಳಾಪುರ ಸಿಂಹಾಸನ ಕರ್ತರಾದ' ಎಂದು ನಂಜಯ್ಯ ದೇವರನ್ನು ವರ್ಣಿಸಿದೆ. ಹೀಗೆಯೇ ಈ ಆರಾಧ್ಯ ಜಂಗಮರಿಗೆ ಭಾರದ್ವಾಜ, ಅತ್ರಿ ಮೊದಲಾದ ಗೊತ್ರಗಳು ಶಾಸನಗಳಲ್ಲಿ 18ನೆಯ ಶತಮಾನದವರೆಗೂ ಕಂಡುಬರುತ್ತಿದ್ದು, ಇತ್ತೀಚಿಗೆ ಇವುಗಳಿಗೆ ಬದಲು ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಗೋತ್ರಗಳನ್ನು ಕಲ್ಪಿಸಿಕೊಂಡಿದ್ದಾರೆ. ಇಂಥ ವೈದಿಕ ಗೊತ್ರ ವಾದಿಗಳನ್ನು 'ಗೋತ್ರ ಮಾದಾರ ಚೆನ್ನಯ್ಯನೆಂದು ಹೇಳಿರಯ್ಯ' ಎಂಬ ನಿಲುವಿನ ಲಿಂಗಾಯತರೆನ್ನಬಹುದೇ? ಈ ಬ್ರಾಹ್ಮಣ್ಯಕಾರಣವಾಗಿಯೇ ಇವರು ಸೊಲ್ಲಾಪುರ ವಾರದ ಮಲ್ಲಪ್ಪನವರ ಹಣ ಬಳಸಿಕೊಂಡು, ತಮ್ಮ ಪ್ರಕಟಣೆಗಳಿಗೆ 'ಲಿಂಗಿ ಬ್ರಾಹ್ಮಣ ಗ್ರಂಥಮಾಲೆ' ಎಂಬ ಹೆಸರಿಟ್ಟಿದ್ದರು. ಇವರು ಶರಣ ಜಂಗಮರೊಂದಿಗಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿಕೊಳ್ಳಲು, ತಮ್ಮ ಪ್ರಾಚೀನತೆ ಸಾಧಿಸಿಕೊಳ್ಳಲು ಚತುರಾಚಾರ್ಯರ ಹೆಸರು ಸೇರಿಸಿ 3-4 ಜನ ಅಪ್ರಸಿದ್ಧ ಶರಣರ ಹೆರಿನಲ್ಲಿ 4-5 ಕೃತಕ-ನೀರಸ ವಚನ ಬರೆದರು. ಚತುರಾಚಾರ್ಯರು ಪ್ರಸಿದ್ದರೇ ಆಗಿದ್ದರೆ 12ನೆಯ ಶತಮಾನದ ಮಿಕ್ಕ ಪ್ರಸಿದ್ದ ಬಸವ ಅಲ್ಲಮ ಚೆನ್ನ ಬಸವರೇಕ ಇವರನ್ನು ಹೆಸರಿಸಲಿಲ್ಲ? 13ನೆಯ ಶತಮಾನದ ಹರಿಹರ, ರಾಘವಾಂಕ, 14ನೆಯ ಶತಮಾನದ ಭೀಮಕವಿ, 15ನೆಯ ಶತಮಾನದ ಮಗ್ಗೆಯ ಮಾಯಿದೇವ, ಲಕ್ಕಣದಂಡೇಶ, ಮಹಾಲಿಂಗದೇವ, ಜಕ್ಕಣಾರ್ಯ, ಕಲ್ಲುಮಠದ ಪ್ರಭುದೇವ, ಚಾಮರಸರು ಇವರನ್ನು ಕುರಿತು ಸ್ವತಂತ್ರ ಕೃತಿ ರಚಿಸುವುದು ಹೋಗಲಿ, ಪ್ರಾಸಂಗಿಕವಾಗಿಯೂ ಏಕೆ ಪ್ರಸ್ತಾಪ ಮಾಡುವುದಿಲ್ಲ? ಕೃತಿ ಪ್ರಾರಂಭದಲ್ಲಿ ಸ್ತುತಿಯನ್ನು ಏಕೆ ಮಾಡಿಲ್ಲ. ಹರಿಹರ ಬರೆದಿರುವ ರಗಳೆ ಚತುರಾಚಾರ್ಯ ಒಕ್ಕುಟದ ರೇವಣಾರಾಧ್ಯನನ್ನು ಕುರಿತುದಲ್ಲ. ಶೈವ ನಾಥಪಂಥೀಯ ರೇವಣ ಸಿದ್ಧನನ್ನು ಕುರಿತುದಾಗಿದೆ. ಹರಿಹರನ ಸಮಕಾಲಿನನಾದ ಪ್ರಸಿದ್ಧ ನಾಗನಾಥಾಚಾರ್ಯ ತನ್ನ ಸುಪ್ರಸಿದ್ಧ 'ವೀರಮಾಹೇಶ್ವರಾಚಾರ ಸಂಗ್ರಹ'ದ ಪೀಠಿಕೆಯಲ್ಲಿ ದೇವರ ಸ್ತುತಿ ಮುಗಿಸುತ್ತಲೇ ನಮೋ ಬಸವರಾಚಾಯ ಎಂದು ಮೊದಲಾಗಿ ನಾಲ್ಕೈದು ಜನ ಶರಣರನ್ನು ನೆನೆಯುವನೇ ಹೊರತು ಚತುರಾಚಾರ್ಯರನ್ನಲ್ಲ. ಇದು ಈ ಹೊತ್ತಿಗೆ ಚತುರಾಚಾರ್ಯರ ಪರಿಕಲ್ಪನೆ ಇನ್ನೂ ಹುಟ್ಟಿರಲಿಲ್ಲವೆಂದೇ ಸೂಚಿಸುತ್ತದೆ. ಇಷ್ಟೇ ಏಕೆ ಸಂಪಾದನೆಯ ಪರ್ವತೇಶ ತಾನು ಚತುರಾಚಾರ್ಯ ಪುರಾಣ ಬರೆಯುತ್ತಿದ್ದರೂ ಆರಂಭದ ದೇವತಾ ಸ್ತುತಿ ಮುಗಿಯುತ್ತಲೇ ಬಸವಾದಿ ಶರಣರನ್ನು ಸ್ಮರಿಸಿರುವುದು ಈ ಪುರಾಣ ರಚಿಸುವ ಕಾಲದಲ್ಲಿಯೂ (1698) ಎಲ್ಲ ಧಾರ್ಮಿಕ ಪುರುಷರಿಗಿಂತ ಶರಣರಿಗೆ ಪೂಜ್ಯಸ್ಥಾನ ಸಲ್ಲಿಸುತ್ತಿದ್ದುದನ್ನು ಸೂಚಿಸುತ್ತದೆ.ಈ ಚತುರಾಚಾರ್ಯರನ್ನು ಕುರಿತು ಸಣ್ಣ ಪ್ರಸ್ತಾಪ ಮೊದಲ ಬಾರಿ ಬರುವುದು 1530 ಗುಬ್ಬಿ ಮಲ್ಲಣ್ಣನ ವೀರಶೈವಾಮೃತ ಮಹಾಪುರಾಣದಲ್ಲಿ. ಆಮೇಲೆ ನಾಲ್ವರನ್ನು ಕುರಿತು ಮೊದಲ ಸ್ವತಂತ್ರ ಕೃತಿಯೆಂದರೆ 1668 ರಲ್ಲಿ ಸಂಪಾದನೆಯ ಪರ್ವತೇಶ ಬರೆದ ಚತುರಾಚಾರ್ಯ ಪುರಾಣ. ಆಶ್ಚರ್ಯದ ಸಂಗತಿಯೆಂದರೆ ಇಂದು ಚತುರಾಚಾರ್ಯರಲ್ಲಿ ಪರಿಣಿತನಾಗಿರುವ ಶ್ರೀಶೈಲಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯನನ್ನು ಬಿಟ್ಟು ಇವನು ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯನನ್ನು ಸೇರಿದ್ದಾನೆ. ಈ ಗೊಂದಲವನ್ನು ನೋಡಿದರೆ ಇವನ ಕಾಲದ ವರೆಗೂ ಚತುರಾಚಾರ್ಯ ಒಕ್ಕೂಟದಲ್ಲಿ ಯಾರ ಹೆಸರು ಸೇರಿಸಬೇಕೆಂಬ ಬಗ್ಗೆ ಇವರಲ್ಲಿಯೇ ಒಂದು ನಿಶ್ಚಿತ ನಿಲವು ಇರಲಿಲ್ಲವೆನಿಸುತ್ತದೆ. ಮಿಕ್ಕ ಕೃತಿಗಳಲ್ಲಿ ಈ ಗೊಂದಲ ಇನ್ನೂ ವರ್ಧಿಸಿದೆ. ಮುಂದಿನ ದಿನಗಳಲ್ಲಿ ಕಾಶಿ ಪೀಠವನ್ನು ಸೇರಿಸಿ, ಪಂಚಾಚಾರ್ಯ ವರ್ತುಲವನ್ನು ಪೂರ್ಣಗೊಳಿಸಿ, ಅಧಿಕೃತತೆಯ ಸಲುವಾಗಿ ಈ ಕಲ್ಪಿತ ಸಂಗತಿಗಳನ್ನು ಆಗಮಗಳಲ್ಲಿ ಸೇರಿದರು. ಕರ್ನಾಟಕದ ಹೊರಗೆ ಸಿಗುವ ಆಗಮ ಹಸ್ತ ಪ್ರತಿಗಳಲ್ಲಿ ಈ ಸಂಗತಿಗಳಿಲ್ಲವೆಂದು ತಿಳಿದು ಬಂದಿದೆ. ಸಾಲದುದಕ್ಕೆ ಸಿದ್ಧಾಂತ ಶಿಖಾಮಣಿಯೆಂಬ ಕೃತಕ ಗ್ರಂಥ ರಚಿಸಿ, ಒಂದು ಧರ್ಮಕ್ಕೆ ಬೇಕಾಗುವ ಧರ್ಮಾಧಿಕಾರಿ, ಧರ್ಮಗ್ರಂಥ, ಧಾರ್ಮಿಕಕೇಂದ್ರಗಳೆಂಬ ಮಠ, ಶರಣ ಜಂಗನರ ಅನುಯಾಯಿತ್ವ ಇತ್ಯಾದಿಗಳನ್ನೆಲ್ಲ ಜೊಡಿಸಿಕೊಂಡರು. ಹೀಗೆ ಒಳಗಿನ ಶರಣ ಜಂಗಮರು ಪ್ರಜಾಧರ್ಮವಾಗಿರುವ ತಮ್ಮ ಶರಣ ಪರಂಪರೆಯನ್ನು ಬಲಿಕೊಟ್ಟು, ಹೊರಗಿನ ಈ ಪುರೋಹಿತ ಶಾಹಿಯನ್ನು ಸ್ವಾಗತಿಸಿದರು.ಈ ಎಲ್ಲ ಚಟುವಟಿಕೆಗಳ ಪರಿಣಾಮವಾಗಿ ಉಜ್ಜಿನಿಯ ಸಾದರಲಿಂಗಾಯತ ಒಡೆತನದ ಮಲ್ಲಿಕಾರ್ಜುನ ಕ್ಷೇತ್ರವು ಮರುಳಾರಾಧ್ಯ ಪೀಠವಾದುದೂ. ಮುಕ್ತಿ ಮುನಿನಾಥ ಪರಂಪರೆಯ ಬಾಳೆ ಹಳ್ಳಿಯ ನಾಥಕ್ಷೇತ್ರವು ರೇವಣಾರಾಧ್ಯ ಪೀಠವಾದುದು ಇತಿಹಾಸವನ್ನು ಮುಚ್ಚಿಹಾಕಿದ ಸಂಗತಿಗಳಾಗಿವೆ. ಕಾಶಿಯ ಗೋಸಾವಿಮಠ ಕಿತ್ತುಕೊಂಡು, ನರೇಶ ಜಯನಂದನ ಮಹಾರಾಜನ ದತ್ತಿ ಇತ್ಯಾದಿ ದಾಖಲೆಗಳನ್ನು ಸೃಷ್ಠಿಸಿದುದು, ಮಲ್ಲಿಕಾರ್ಜುನ ಜಂಗಮ ಗೋಸಾವಿ ಇತ್ಯಾದಿ ಗುರುಗಳ ಹೆಸರನ್ನು ಮಲ್ಲಿಕಾರ್ಜುನ ಶಿವಾಚಾರ್ಯರೆಂದು ಬದಲಾಯಿಸಿರುವುದು, ಈ ಪೀಠ ವೀರಶೈವರ ಕೈಗೆ ಬಂದು ಕೇವಲ 9 ತಲೆಮಾರು ಗತಿಸಿದ್ದರೂ 86 ತಲೆಮಾರುಗಳ ಪಟ್ಟಿ ಪ್ರಕಟಿಸಿದುದು ಸುಳ್ಳಿನ ಕಂತೆಗಳೇ ಸರಿ.ಶರಣರು ಗುರುಮಾರ್ಗಿಗಳು, ಪಂಚಾಚಾರ್ಯರು ಆಚಾರ್ಯ ಮಾರ್ಗಿಗಳು. ಹೀಗಾಗಿ ಅವರು ಜಗದ್ಗುರುಗಳು, ಇವರು ಜಗದಾಚಾರ್ಯರು. ಹೀಗಿದ್ದೂ 19ನೆಯ ಶತಮಾನದಿಂದ ತಮ್ಮನ್ನು ಜಗದ್ಗುರುಗಳೆಂದು ಕರೆದುಕೊಂಡುದು ತಾತ್ವಿಕ ವಿರೋಧವಾಗಿದೆ. ಇವರು 'ಜಗದ್ಗುರು' ವಿಶೇಷಣ ಬಳಸಬಾರದೆಂದು ಕಳೆದ ಶತಮಾನದಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಸಿದ್ದರಾಮಪ್ಪ ಪಾವಟೆಯವರು ಕೋರ್ಟಿನಲ್ಲಿ ವಾದಿಸಿದುದನ್ನು ಇಲ್ಲಿ ನೆನೆಯಬಹುದು. ಇಂಥ ಇನ್ನೊಂದು ತಾತ್ವಿಕ ವಿರೋಧವೆಂದರೆ ಶರಣ ಜಂಗಮರದು 'ಅದ್ವೈತ'ವಾದರೆ, ಕೈಲಾಸ, ಶಿವ-ಪಾರ್ವತಿ, ಸಾಲೋಕ್ಯ ಇತ್ಯಾದಿಗಳನ್ನು ನಂಬುವ ಆರಾಧ್ಯ ಜಂಗಮರದು 'ದ್ವೈತ' ವಾಗಿದೆ. ಇಂಥ ವೈರುಧ್ಯಗಳ ನಡುವೆಯೂ ಕೆಲವು ಸಾಮ್ಯಗಳನ್ನು ಸೃಷ್ಠಿಸಿ, ಈ ಆಂದ್ರಮೂಲದ ಆರಾಧ್ಯ ಜಂಗಮರು ಕರ್ನಾಟಕ ಮೂಲದ ಶರಣ ಜಂಗಮರನ್ನು ನಂಬಿಸಿ, ಅವರ ಮೇಲೆ ಸವಾರಿ ಮಾಡಿದರು. ಮುಗ್ಧಭಕ್ತರೂ ಇದಕ್ಕೆ ಕೈಜೋಡಿಸಿದರು
-ಡಾ. ಎಂ.ಎಂ. ಕಲಬುರ್ಗಿ
ಮನದ ವಿಚಿತ್ರ ವ್ಯಾಪಾರಗಳು
"ತನ್ನಿಚ್ಛೆಯ ನುಡಿದಡೆ ಮೆಚ್ಚುವದೀ ಮನವು,
ಇದಿರಿಚ್ಛೆಯ ನುಡಿದಡೆ ಮೆಚ್ಚದೀ ಮನವು,
ಕೂಡಲ ಸಂಗನ ಶರಣರ ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು".
ಬಸವಣ್ಣನವರ ಈ ವಚನವನ್ನು ಗಮನಿಸಿದಾಗ, ಬಸವಣ್ಣನಿಗೆ ಇದ್ದ ವ್ಯಕ್ತಿತ್ವ ವಿಕಸನದ ಆಸಕ್ತಿ ವ್ಯಕ್ತವಾಗುತ್ತದೆ.
ಮನಸಾಕ್ಷಿಯ ಕುರಿತು ವ್ಯಾಖ್ಯಾನಿಸುವಾಗ ಮೇಲಿನ ಸಾಲುಗಳ ಗಂಭೀರತೆಯನ್ನು ಗಮನಿಸಬೇಕು.
ನಮ್ಮ ಮನಸ್ಸು ಸದಾ ತನ್ನಿಚ್ಛೆಯಂತೆ ನಡೆಯಲು ಬಯಸುತ್ತದೆ. ಮನಸಿನ ಇಚ್ಛೆಗಳು ಯಾವುದು ಎಂಬುದನ್ನು ವಿವೇಚಿಸುವವರು ಯಾರು ಎಂಬುದು ಅಷ್ಟೇ ಕುತೂಹಲದ ಪ್ರಶ್ನೆ.
ಅಂದರೆ ಜಾಗೃತಾವಸ್ಥೆಯ ಮನಸು ಸದಾ negative ಆಲೋಚನೆಗಳ ಕಡೆಗೆ ಹರಿಯುತ್ತದೆ. ಈ ರೀತಿಯ ಹರಿದಾಟವನ್ನು ಮನವೆಂಬ ಮರ್ಕಟ ಎಂದು ನುಡಿಯುತ್ತಾರೆ. ಈ ಹರಿದಾಟವನ್ನು ನಿಲ್ಲಿಸುವುದೇ balance of mind ಎನ್ನುತ್ತಾರೆ.
ಮನ ಮೆಚ್ಚುವಂತೆ ನಡೆಯದೇ, ಜನ ಮೆಚ್ಚುವಂತೆ ನಡೆ ಎಂಬ ಹೇಳಿಕೆಯೂ ಇದೆ. ವ್ಯಕ್ತಿತ್ವ ವಿಕಸನದ ಸಂದರ್ಭದಲ್ಲಿ ಈ ರೀತಿಯ ಉಕ್ತಿಗಳನ್ನು confuse ಮಾಡಿಕೊಳ್ಳುವ ಅಗತ್ಯವಿಲ್ಲ.
ಇಲ್ಲಿ ಅಣ್ಣ ಹೇಳುವುದು ನಿಯಂತ್ರಣವಿಲ್ಲದ ನಿತ್ರಾಣ, ದುರ್ಬಲ conscious mind ಕುರಿತಾಗಿ. ಹೀಗಾಗಿ ಸದೃಢ ಮನಸಿನ ಪರಿಕಲ್ಪನೆ ನಮಗೆ ಸ್ಪಷ್ಟವಿರಬೇಕು.
ಜನ ಮೆಚ್ಚುವ, ಹುಚ್ಚು ಮನಮೆಚ್ಚುವ ಕೆಲಸ ಮಾಡುವುದಕ್ಕಿಂತ ವಿವೇಚನಾ ಪೂರ್ಣ ಮನಸು ಹೇಳುವ ಆತ್ಮಸಾಕ್ಷಿಗೆ ಬೇಸರ ಎನಿಸದ ಕೆಲಸಗಳನ್ನು ಮಾಡಬೇಕು.
ಜನರ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕು ಎಂಬುದು ಕೂಡಾಸರಿಯಲ್ಲ. ಇಂಗ್ಲಿಷ್ ಸಾಹಿತಿ George orwel ತನ್ನ shooting An elephant ಎಂಬ ಲೇಖನದಲ್ಲಿ ಜನರ ನಿರೀಕ್ಷೆಗಳ ಕುರಿತು ರಸವತ್ತಾಗಿ ವಿವರಿಸುತ್ತಾನೆ.
ಇಂಗ್ಲಿಷ್ ಅಧಿಕಾರಿಯ ಕೈಯಲ್ಲಿ ರೈಫಲ್ ಇದ್ದುದನ್ನು ಕಂಡ ನೆರೆದ ಸಾವಿರಾರು ಜನರು, ಅಧಿಕಾರಿ ಆನೆಯನ್ನು ಕೊಲ್ಲಲಿ ಎಂದು ಬಯಸುತ್ತಾರೆ. ಆದರೆ ಮಾನವೀಯತೆಯ ದೃಷ್ಠಿ ಇಟ್ಟುಕೊಂಡ orwel ಆನೆಯನ್ನು ಕೊಲ್ಲುವ ಮನಸು ಮಾಡುವುದಿಲ್ಲ.
ತನ್ನಲ್ಲಿ ಉಂಟಾದ ತಲ್ಲಣಗಳನ್ನು ಲೇಖಕ ಹೃದ್ಯಂಗಮವಾಗಿ ವಿವರಿಸುತ್ತಾನೆ. ಅಂತಿಮವಾಗಿ ಜನರನ್ನು ಓಲೈಸಲೆಂದೇ ಆನೆಯನ್ನು ಕೊಲ್ಲುತ್ತಾನೆ.
ತನ್ನ ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ವ್ಯಥೆ ಪಡುತ್ತಾನೆ. ಒಂದು ಸುಂದರ ಲೇಖನಕ್ಕೆ ಒಂದು ಹೃದ್ಯಂಗಮ ಘಟನೆ ಕಾರಣವಾಯಿತು. ಇಂತಹ ಸಂಬರ್ಭಗಳನ್ನು ನಾವು ಅನೇಕ ಬಾರಿ ಎದುರಿಸಿದಾಗ ಮನಸಾಕ್ಷಿಯ ಪರವಾಗಿ ನಡೆದುಕೊಳ್ಳಬೇಕು ಎಂಬುದೇ ಲೇಖಕನ ಆಶಯ!
ಸಮಯ, ಸಂದರ್ಭ, ಜನರನ್ನು ಮೆಚ್ಚಿಸಲು, ಸಾರ್ವತ್ರಿಕವಾಗಿ ಒಮ್ಮೊಮ್ಮೆ hero ಆಗಲು ಇಂತಹ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.
ಪ್ರತಿ ಕ್ಷಣದ ಆಲೋಚನೆಯಲ್ಲಿ ಎರಡು ರೀತಿಯ ವಿಚಾರಗಳು ನಮ್ಮ ಕಣ್ಮುಂದೆ ಬರುತ್ತವೆ. ಒಳ್ಳೆಯದು - ಕೆಟ್ಟದು, ಜನಪರ - ಜನವಿರೋಧಿ, ಜನಮೆಚ್ಚುವ-ಮನಮೆಚ್ಚುವ....... ಹೀಗೆ ಗೊಂದಲಗಳಲಿ ನಮ್ಮ ಆಲೋಚನಾ ಲಹರಿ ಮುಂದುವರೆಯುತ್ತದೆ. ನಮ್ಮ ನಿರ್ಧಾರಗಳು ಯಾವಾಗಲೂ sub conscious mind ನೀಡುವ ಪ್ರಿಯ ಸಲಹೆಗಳನ್ನು ಸ್ವೀಕರಿಸಿ ಬಿಡುವ weakness ಗೆ ಶರಣಾಗುತ್ತೇವೆ.
ಇದಕ್ಕೊಂದು ಉದಾಹರಣೆಯನ್ನು ಗಮನಿಸೋಣ. ತುಂಬಾ ಶ್ರೀಮಂತರೂ, ಉದಾರಿಗಳ ಹತ್ತಿರ ನೆರವು ಕೇಳಲು ಹೋಗುತ್ತೇವೆ. ನಮ್ಮ ನಿರೀಕ್ಷೆ ಒಂದು ಸಾವಿರ ರೂಪಾಯಿ ಇರುತ್ತದೆ ಎಂದು ಇಟ್ಟುಕೊಳ್ಳೋಣ. ಆದರೆ ಅವರು ಹತ್ತು ಸಾವಿರ ರೂಪಾಯಿ ನೀಡಿದರೆ, ನಾವು ಉಳಿದ ಒಂಬತ್ತು ಸಾವಿರ ರೂಪಾಯಿ ಮರಳಿ ನೀಡುತ್ತೇವೆಯೋ, ಹೇಗೋ, ಒಂದು ವೇಳೆ ನಾವು ಒಂಬತ್ತು ಸಾವಿರ ರೂಪಾಯಿ ಮರಳಿ ನೀಡಿದರೆ ಮಾತ್ರ ಮನಸಾಕ್ಷಿಗೆ ತಕ್ಕಂತೆ ನಡೆದುಕೊಂಡಂತೆ. ಆದರೆ ಹೀಗಾಗಲು ಸಾಧ್ಯವೆ?
ಇಂತಹ ನಿಲುವಿಗೆ ತುಂಬಾ ಆತ್ಮವಿಶ್ವಾಸ, integrety ಬೇಕು.
ಈ ಮನಸ್ಥಿತಿಯನ್ನು ಬಸವಣ್ಣ ಅರ್ಥಪೂರ್ಣವಾಗಿ ವಿವರಿಸುತ್ತಾನೆ. ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಗೆ, ನಾಳಿಂಗೆ ಬೇಕೆಂದನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಖಡಾ ಖಂಡಿತವಾಗಿ ದೃಢ ಸಂಕಲ್ಪದಿಂದ ಹೇಳುತ್ತಾನೆ.
ಬಸವಣ್ಣನಿಗಿರುವ ದೃಢ ಸಂಕಲ್ಪ ನಮಗಿದೆಯೇ? ಎಂದು ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳೋಣ.
ಹೊನ್ನು, ಹೆಣ್ಣು, ಮಣ್ನು ಮಾಯೆ ಎನ್ನುತ್ತಲೇ, ಅದನ್ನು ಸುಂದರವಾಗಿ ನಿರಾಕರಿಸುತ್ತಲೇ, ಸದಾ ಬಯಸುವ, ಬಯಸಿದ್ದನ್ನು ಮುಚ್ಚಿಡುತ್ತಾ ಪಡೆಯಲು ಆಪೇಕ್ಷಿಸುವ ಗೊಂದಲ ಅದೆಂತಹ ಕಿರಿಕಿರಿ.
ಇಂತಹ ಅನೇಕ ಗೊಂದಲಗಳನ್ನು ಎದುರಿಸುತ್ತಲೇ ಬದುಕನ್ನು ನರಕ ಮಾಡಿಕೊಳ್ಳುತ್ತೇವೆ. ಮನಸು ಒಡ್ಡುವ ಐಹಿಕ ಆಸೆಗಳನ್ನು ಪೂರೈಸಲು, ಆಸೆಯೇ ದು:ಖಕ್ಕೆ ಮೂಲ ಎಂದು ದು:ಖಿಸುತ್ತಲೇ ಕಾಲಹರಣ ಮಾಡುವ ವಿಪರ್ಯಾಸಕ್ಕಿಂತ ಹಂತಹಂತವಾಗಿ ಸಾಧ್ಯವಾದಷ್ಟು ನಿರ್ಲಿಪ್ತತೆಯನ್ನು ರೂಪಿಸಿಕೊಳ್ಳೋಣ.
Thursday, May 20, 2010
Gospel of Basava
"Gospel of Basava" is translation of vachanas in English by Late V C Yagati and edited by S R Gunjal (Santubai Apartment, Court Rd., Dharwad --1, Tel: 0835 - 6561011), Published by Basava Samithi, Bangalore.
It is interesting to know that Late Sri Yagati translated 956 musings (vachanas) of Basava in 1950 and kept it in type script for more than fifty years! Though he was in the legal profession, he did devote his time for research and scholastic endeavours. Later on Dr S R Gunjal who wrote biography of Sri Yagati (Published by the Institute of Veera Shaiva Studies, Gadag, 1993) studied thoroughly and wrote introduction consisting of
1) Parliament of Religious experience
2) Basava, a rising Sun
3) Vachana Bhandar - Establishment of Public Library
4) P. G. Halakatti
5) Works attributed to Basava. A brief review of the three kinds of works of Basava are as follows:
i) (a) Vachanas classified into six spiritual stages (Shatsthala vachanas)
i) (b) Additional vachanas (Hechchina vachanas)
ii) Musical verses (Swara vachanas)
iii) Vachanas of prophecy (Kaalajnana vachanas)
6) Translation of Vachanas of Basava
7) Translation of traditional collection and additional vachanas
8) Traditional collection translated by V.C. Yagati
9) The Gospel of Basava - A brief critical review
10) Notes on some vachanas
11) Signs of Indication from English to Kannada vachanas
12) A Bibliograpy on Basava
This is a great book for English readers of vachanas of Basava, the twelfth century revolutionary philosopher-poet and statesman-mystic. As mentioned by Prof. Dan.A. Chekki, Professor Emeritus, The University of Winnipeg, Canada, in his introduction in this book; these conise poetic -prose musings articulate a blend of the material and spiritual values, and enunciate a code of conduct and a system of spiritual self-illumination. Along with translation, a detailed introduction by Dr S R Gunjal with many chapters to support the treasure of Vachanas for our readers.
Copy of this book can be purchased from Basava Samithi of Bangalore for IRs 150.00 + Postage & Handling. it is hardbound book of about 435 pages, clear print. Please find copy of the cover page of this book as scanned attachment.
Dr Lingappa Kalburgi
Wednesday, May 19, 2010
Tuesday, May 18, 2010
Basava Smaaraka
ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿಯ ಬಸವಣ್ಣನ ಜನ್ಮಸ್ಥಳದಲ್ಲಿ ನಿರ್ಮಿಸಿರುವ ಭವ್ಯ ಸ್ಮಾರಕ.
ಬಸವ ಸ್ಮಾರಕ ಲೋಕಾರ್ಪಣೆ
ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ
ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನಿಗೊಂದು ಸ್ಥಿರ ಸ್ಮಾರಕ ಆತನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಾಣವಾಗಿದೆ. ಆ ಮೂಲಕ ಬಸವಾಭಿಮಾನಿಗಳ ಬಹುದಿನಗಳ ಕನಸೊಂದು ನನಸಾಗಿದೆ.
ವಿಜಾಪುರ: ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನಿಗೊಂದು ಸ್ಥಿರ ಸ್ಮಾರಕ ಆತನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಾಣವಾಗಿದೆ. ಆ ಮೂಲಕ ಬಸವಾಭಿಮಾನಿಗಳ ಬಹುದಿನಗಳ ಕನಸೊಂದು ನನಸಾಗಿದೆ.
ಇಂಡೋ-ಸಾರ್ಸೆನಿಕ್ ಶಿಲ್ಪಕಲೆ ಹಾಗೂ ಅಷ್ಟಕೋನಾಕೃತಿ ಶೈಲಿಯ ಈ ಸ್ಮಾರಕ 90 ಅಡಿ ಎತ್ತರವಿದೆ. ಸ್ಮಾರಕದ ಸುತ್ತಲೂ ವರಾಂಡ ಇದ್ದು, ಚಾಲುಕ್ಯ ಶೈಲಿಯಲ್ಲಿ ಕೆತ್ತಿದ ಗ್ರಾನೈಟ್ ಕಲ್ಲಿನ ಕಂಬಗಳನ್ನು ಅಳವಡಿಸಲಾಗಿದೆ. ಪ್ರದರ್ಶನ ಸ್ಥಳದ ಛಾವಣಿ 30 ಅಡಿ ಎತ್ತರವಿದೆ. ಮಧ್ಯದಲ್ಲಿ 36 ಅಡಿ ಎತ್ತರದ ಇಂಡೋ-ಸಾರ್ಸೆನಿಕ್ ಶೈಲಿಯ ಗೋಪುರ ನಿರ್ಮಿಸಲಾಗಿದೆ. ಸುತ್ತಲೂ ಇರುವ ಕಿಂಡಿಗಳಿಂದ ದಿನವಿಡೀ ಸೂರ್ಯನ ಬೆಳಕು ಸ್ಮಾರಕದ ಒಳಗೆ ಬೀಳುವಂತೆ ಮಾಡಲಾಗಿದೆ.
ಬಸವಣ್ಣನವರ ಬಾಲ್ಯದ ದಿನಗಳಿಂದ ಹಿಡಿದು ಕೂಡಲ ಸಂಗಮದಲ್ಲಿ ಐಕ್ಯವಾಗುವವರೆಗೆ ಅವರ ಜೀವನದ ಪ್ರಮುಖ ಘಟನಾವಳಿಗಳನ್ನು ಪರಿಚಯಿಸುವ ಕಟ್ಟಿಗೆ, ಗಾಜು, ಕಲ್ಲು, ಕಂಚಿನಿಂದ ನಿರ್ಮಿಸಿರುವ ಕಲಾಕೃತಿಗಳು ಈ ಸ್ಮಾರಕದ ಮುಖ್ಯ ಆಕರ್ಷಣೆ.
ಬಸವಣ್ಣನವರ ತಂದೆ ಮಾದರಸ, ಅಕ್ಕ ನಾಗಮ್ಮ ಅವರ ಕಂಚಿನ ಮೂರ್ತಿ, ಕಟ್ಟಿಗೆಯ ತೊಟ್ಟಿಲು, ತಾಯಿ ಮಾದಲಾಂಬಿಕೆ ತನ್ನ ಮಗು ಬಸವಣ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡಾಗ ಗುರು ಜಾತವೇದ ಮುನಿಗಳು ಆಶೀರ್ವದಿಸುವ ಮೂರ್ತಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸ್ಮಾರಕದ ಮುಖ್ಯ ರಸ್ತೆಗೆ ಮಹಾದ್ವಾರ ಹಾಗೂ ವಿಶಾಲವಾದ ರಸ್ತೆ, ಉದ್ಯಾನವನ ತಲೆ ಎತ್ತಿದೆ. ಸ್ಮಾರಕದ ಕೆಳ ಮಹಡಿಯಲ್ಲಿ 250 ಆಸನದ ವಿಶಾಲವಾದ ಸಭಾಭವನ, ಗ್ರಂಥಾಲಯ ನಿರ್ಮಿಸಲಾಗಿದೆ.
ಜನತೆಯ ಬೇಡಿಕೆಯಂತೆ ಬಸವನ ಬಾಗೇವಾಡಿಯನ್ನು 2004ಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಲಾಯಿತು. ಬಸವಣ್ಣ ಜನಿಸಿದ ಮನೆಯ ಸುತ್ತಲಿನ 56 ಮನೆಗಳನ್ನು ಸ್ವಾಧೀನ ಪಡಿಸಿಕೊಂಡು ಪ್ರಾಧಿಕಾರ ಈ ಸ್ಮಾರಕ ನಿರ್ಮಿಸಿದೆ.
ಬಸವನ ಬಾಗೇವಾಡಿಯಲ್ಲಿರುವ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ತ್ರಿಕೂಟೇಶ್ವರ ದೇವಾಲಯದ ಶೈಲಿಯಲ್ಲಿ ಹಾಗೂ ಮೂಲ ದೇವಸ್ಥಾನದ ವಿನ್ಯಾಸಕ್ಕೆ ಧಕ್ಕೆ ಬರದ ಹಾಗೆ ಪುನರ್ ನಿರ್ಮಿಸಲಾಗುತ್ತಿದೆ
ಪಠ್ಯಪುಸ್ತಕದಲ್ಲಿ ಬಸವಣ್ಣನ ಜೀವನ ಸಾಧನೆ :ಮುಖ್ಯಮಂತ್ರಿ
ಪ್ರಜಾವಾಣಿ ವಾರ್ತೆ ಸೋಮವಾರ , ಮೇ 17, 2010
ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಿಸಿರುವ ‘ಬಸವ ಸ್ಮಾರಕ ಭವನ’ವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.
ವಿಜಾಪುರ: ‘ಯುಗ ಪರಿವರ್ತಕ ಬಸವಣ್ಣನ ಜನ್ಮಭೂಮಿ ಬಸವನ ಬಾಗೇವಾಡಿಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವುದರ ಜೊತೆಗೆ, ಬಸವಣ್ಣನವರ ಸಂದೇಶಗಳನ್ನು ಜಗತ್ತಿಗೆ ತಲುಪಿಸುವ ಸಂಕಲ್ಪ ನಮ್ಮದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಿಸಿರುವ ‘ಬಸವ ಸ್ಮಾರಕ ಭವನ’ವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು
‘ಬಸವಣ್ಣ’ ಅವರು ಅಮರ ಸಮಾಜ ಸುಧಾರಕರು. ಗಾಂಧಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರ ವಿಚಾರಗಳನ್ನು 800 ವರ್ಷಗಳ ಹಿಂದೆಯೇ ಆಚರಣೆಗೆ ತಂದಿದ್ದರು. ಬಸವಣ್ಣ ಸಾರಿದ ಸ್ತ್ರೀ ಸ್ವಾತಂತ್ರ್ಯ ಜಗತ್ತಿಗೆ ಆದರ್ಶಪ್ರಾಯ. ಅಂತಹ ಮಹಾನ್ ದಾರ್ಶನಿಕನ ಜೀವನ-ಸಾಧನೆಗಳು ಪಠ್ಯಪುಸ್ತಕದಲ್ಲಿ ಬರುವಂತೆ ನೋಡಿಕೊಳ್ಳಬೇಕಿದೆ. ಮನೆ-ಮನಗಳಲ್ಲಿ ನಾವೆಲ್ಲರೂ ಅವರನ್ನು ಆರಾಧಿಸಬೇಕಿದೆ’ ಎಂದರು
‘ಡಾ.ಶಿವಾನಂದ ಜಾಮದಾರ ಅವರಂಥ ಒಬ್ಬ ಅಧಿಕಾರಿ, ಜಿಲ್ಲಾ ಆಡಳಿತ ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎಂಬುದಕ್ಕೆ ಈ ಸ್ಮಾರಕವೇ ಉದಾಹರಣೆ. ಬಸವಣ್ಣ ಕೇವಲ ಕರ್ನಾಟಕದ ಹೆಮ್ಮೆಯ ಪುತ್ರ ಮಾತ್ರವಲ್ಲ. ನಾಡಿನ ಶ್ರೇಷ್ಠ ವ್ಯಕ್ತಿ. ಅವರ ಜೀವನ-ಸಾಧನೆ ಪರಿಚಯಿಸುವ ಈ ಸ್ಮಾರಕ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ. ನಾಡಿನ ಜನರೆಲ್ಲ ಇಲ್ಲಿಗೆ ಬಂದು
ನೋಡುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಮೈಸೂರು ದಸರೆ, ಹಂಪಿ ಉತ್ಸವದ ಮಾದರಿಯಲ್ಲಿ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿಯನ್ನು ನಾಡಹಬ್ಬವನ್ನಾಗಿ ಆಚರಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದರು.
ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಅವರನ್ನು ಸನ್ಮಾನಿಸಲಾಯಿತು.
‘ಶೋಷಿತರ ಹಕ್ಕುಗಳಿಗೆ ಹೋರಾಡಿದ ಪ್ರಥಮ ವ್ಯಕ್ತಿ ಬಸವಣ್ಣ’ –
ಬಸವನಬಾಗೇವಾಡಿ: ಸ್ತ್ರೀ ಪುರುಷರ ಮಧ್ಯೆ ಇದ್ದ ಅಸಮಾನತೆ ಯನ್ನು ನಿವಾರಿಸಿ, ಮೇಲು ಕೀಳು ಭಾವನೆ ತೊರೆದು, ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು, ಶೋಷಿತರ ಹಕ್ಕುಗಳಿಗೋಸ್ಕರ ಹೋರಾಟ ಮಾಡಿದ ವ್ಯಕ್ತಿ ಬಸವಣ್ಣ ಎಂದು ಚಿತ್ರದುರ್ಗದ
ಬೃಹನ್ಮಠದ ಶ್ರೀ ಶಿವಮೂರ್ತಿ ಮುರಘರಾಜೇಂದ್ರ ಶರಣರು ಹೇಳಿದರು.
ಪಟ್ಟಣದಲ್ಲಿ ಬಸವ ಜನ್ಮ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಠ ಮಂದಿರಗಳಲ್ಲಿ ಗರ್ಭ ಗುಡಿಗೆ ಪ್ರವೇಶ ನಿಷೇಧಿಸಿದ್ದನ್ನು ವಿರೋಧಿಸಿ ಶೋಷಿತ, ದೀನ ದಲಿತರ ಪರವಾಗಿ ಅವರ ಹಕ್ಕನ್ನು ಮಂಡಿಸಿದ ವ್ಯಕ್ತಿ ಬಸವಣ್ಣ ಎಂದರು.
ತಮ್ಮ ವಿವಿಧ ಸರಳ ವಚನಗಳ ಮೂಲಕ ಸಮಾಜ ದಲ್ಲಿ ಸಮಾನತೆ ತರಲು ಹೋರಾಡಿದ ವನು ಬಸವಣ್ಣ. ಎಲ್ಲರನ್ನು ನಮ್ಮವರಂತೆ ತಿಳಿಯಬೇಕು ಅಂದಾಗ ಬಸವ ಧರ್ಮ, ಬಸವ ಕುಲ ಉದ್ಧಾರ ಆಗುತ್ತದೆ ಎಂದರು.
ಬಸವಣ್ಣನವರು ಹಾಕಿಕೊಂಡ ಸಾಧನೆಗಳ ಸರಮಾಲೆಯನ್ನು ಯಾರೂ ತೆಗೆಯಲು ಸಾಧ್ಯವಿಲ್ಲ, ಆ ಸರಮಾಲೆ ಇಂದಿನ ಜನಕ್ಕೆ ಸ್ಫೂರ್ತಿಯಾಗಬೇಕು, ಆ ಸಾಧನೆಯ ಮೂರ್ತಿಯೇ ಕೀರ್ತಿಯ ಮೂರ್ತಿಯಾಗಲು ಸಾಧ್ಯ ಎಂದರು.
ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಬಸವಣ್ಣ ಹುಟ್ಟಿದ ನಾಡಿನಲ್ಲಿ ಬಸವ ಜಯಂತಿ ಆಚರಿಸುವುದು ಭಾವನಾತ್ಮಕ ಬೆಸುಗೆಯ ಅನುಭವ ಸಾರುತ್ತದೆ. ಬಸವಣ್ಣನಂಥ ಮಹಾನ್ ವ್ಯಕ್ತಿಯನ್ನು ವಿಶ್ವಕ್ಕೆ ನೀಡಿದ ಈ ನಾಡು ಧನ್ಯ. ಭಾನುವಾರದ ಮೆರವಣಿಗೆಯಲ್ಲಿ ಕುಂಭ ಮೇಳದ ಹೊರತಾಗಿ ವಚನಗಳ ಕಟ್ಟುಗಳನ್ನು ಹೊತ್ತು ಮೆರವಣಿಗೆ ಮಾಡಿದ್ದು ಭಾವ ತೀವ್ರತೆಯ ಸಂಗಮ ಎಂದರು.
ಫ್ರಾನ್ಸ್ ದೇಶದ ಪ್ಯಾರಿಸ್ ನಗರದ ಗ್ರಂಥಾಲಯದಲ್ಲಿ ತಾಳೆಗರಿ ಸಂಗ್ರಹ ಕೊಠಡಿಯಿದೆ. ಅಲ್ಲಿ ಹೋದಾಗ ಒಂದು ತಾಳೆಗರಿಯ ಕಟ್ಟನ್ನು ನೋಡಿದಾಗ ಅದು ಬಸವಣ್ಣನ ವಚನದ ತಮಿಳು ಭಾಷಾಂತರ ವಾಗಿತ್ತು. ಆ ವಚನದ ತಿರುಳು “ಶಿವಭಕ್ತರಿಲ್ಲದ ಊರು ಸುಡುಗಾಡು ಕೂಡಲಸಂಗಮ” ಎಂದು ಇತ್ತು. ಬಹು ಹಿಂದೆಯೇ ಬಸವಣ್ಣನವರು ವಚನ ಬೇರೆ ಬೇರೆ ಭಾಷೆಗೆ ಭಾಷಾಂತರವಾಗಿದ್ದು ಇದಕ್ಕೆ ಸಾಕ್ಷಿ, ಹೀಗಾಗಿ ಬಸವಣ್ಣ ವಿಶ್ವ ಗುರು ಎಂದರು.
ವೇದಿಕೆಯ ಮೇಲೆ ಗದುಗಿನ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿ, ಇಲಕಲ್ಲನ ಡಾ. ಮಹಾಂತ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಯರನಾಳದ ಗುರುಸಂಗನಬಸವ ಸ್ವಾಮೀಜಿ, ಅವರಾದಿಯ ಮೃತ್ಯುಂಜಯ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ, ಜೋಗ ಫಾಲ್ಸ್ ಮಠದ ಡಾ. ವಿಜಯಕುಮಾರ ಮಹಾನುಭಾವಿಗಳು, ಕೌಠಾದ ಬೆಲ್ದಾಳ ಶರಣ ಆಶ್ರಮದ ಬೆಲ್ದಾಳ ಸಿದ್ದರಾಮ ಶರಣರು, ಬೀದರ ಬಸವ ಸೇವಾಶ್ರಮದ ಅಕ್ಕಅನ್ನಪೂರ್ಣ, ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ, ಬಸವ ಕಲ್ಯಾಣದ ಶರಣೆ ಬಸವರಾಜೇಶ್ವರಿ, ಚಿತ್ರದುರ್ಗ ಮಾದಾರ ಚೆನ್ನಯ್ಯ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಗುರುಪೀಠದ ಸೇವಾಲಾಲ ಸರ್ದಾರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಶಾಸಕ ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು.
ಸಂಕಲನ
ಪ್ರಕಾಶ್ ಬಿರಾದರ
Saturday, May 15, 2010
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಸರಳ- ಸುಂದರ - ಅರ್ಥಪೂರ್ಣ - ವಿಶ್ವ ಕಾಯಕ ದಿನ
ಕೇರಳದ ತಿರುವನಂತಪುರದ 'ವಿಶ್ವ ಕಾಯಕ ದಿನ' ಮೇ ಒಂದರಂದು ಆಯೋಜಿಸಿದ್ದು ಅರ್ಥಪೂರ್ಣ. ಕೇರಳದ ಬಸವ ತತ್ವ ಅನುಯಾಯಿಗಳು ತುಂಬ ನಿಷ್ಠರಾಗಿದ್ದಾರೆ ಎಂಬುದು ಈ ಸರಳ-ಸುಂದರ ಕಾರ್ಯಕ್ರಮದಿಂದ ಸಾಬೀತಾಯಿತು.
ಕೇರಳ ಸರಕಾರದ LDF ನಾಯಕ ಕೃಷಿ ಮಂತ್ರಿ ಶ್ರೀ ಮುಲ್ಲಕರ ರತ್ನಾಕರನ್ ಕಾರ್ಯಕ್ರಮ ಉದ್ಘಾಟಿಸಿದರು. ಬಸವ - ಗಾಂಧೀಜಿ- ವಿವೇಕಾನಂದ ಹಾಗೂ ನಾರಾಯಣ ಗುರು ಅವರ ಸಿದ್ಧಾಂತಗಳು ನಮಗೆಲ್ಲ ದಾರಿದೀಪವಾಗಬೇಕು. ಕೇರಳದ ವೀರಶೈವರು ಬಸವಣ್ಣನನ್ನು ನಮಗೆ ಪರಿಚಯಿಸಿದ್ದು ಹೆಮ್ಮೆ ಎನಿಸಿದೆ.
ಬಸವಣ್ಣ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೇ ಇಡೀ ಜಗತ್ತಿಗೆ ಗುರುವಾಗಿದ್ದಾರೆ. ಅವರ ಕಾಯಕ ಸಿದ್ಧಾಂತ ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಧ್ಯಾನ, ಪೂಜೆಗಿಂತ ಮಿಗಿಲಾದದ್ದು ನಿಜವಾದ ಧರ್ಮವೆಂದರೆ ಕಾಯಕ.
ಕಾಯಕದ ಮೂಲಕವೇ ಒಂದು ಧರ್ಮವನ್ನು ಕಟ್ಟಿ ಬೆಳೆಸಿದ ಬಸವಣ್ಣನವರು ನಮಗೆಲ್ಲ ಆದರ್ಶ ನಾಯಕ ಎಂದರು.
ಬಸವಣ್ಣನವರ ತತ್ವಾದರ್ಶಗಳನ್ನು ಕೇರಳದ ಪಠ್ಯಕ್ರಮದಲ್ಲಿ ಅಳವಡಿಸುವುದು ಹೆಚ್ಚು ಸೂಕ್ತ ಎಂದರು.
ಉತ್ತಮ ಕಾರ್ಯಕ್ರಮ ಆಯೋಜಿಸಿದ ಬಸವ ಸಮಿತಿಯನ್ನು ಅಭಿನಂದಿಸಿದರು ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ದ ಸಾಹಿತಿ - ಚಿಂತಕ ಪ್ರೊ. ಸಿದ್ದು ಯಾಪಲಪರವಿ ಕಾಯಕ - ದಾಸೋಹ ಹಾಗೂ ಅನುಭವ ಮಂಟಪದ ಪರಿಕಲ್ಪನೆಯನ್ನು ವಚನಗಳ ಆಧಾರದ ಮೂಲಕ ವಿವರಿಸಿದರು. ಅಕ್ಷರ-ಅರಿವು, ಕಾಯಕ - ದಾಸೋಹ ಪರಿಕಲ್ಪನೆಯಿಂದಾಗಿ ಧರ್ಮ ಅರ್ಥಪೂರ್ಣವಾಗಿ ಬೆಳೆಯಲು ಸಾಧ್ಯವಾಯಿತು. ವಚನಗಳಲ್ಲಿನ ವಿಚಾರಧಾರೆಗಳು, ಕಾವ್ಯಸೂಕ್ಷ್ಮತೆ, ಸಂಕೇತ, ಪ್ರತಿಮೆಗಳು ಹಾಗೂ ಸುಂದರ ಭಾಷೆ ವಚನ ಸಾಹಿತ್ಯವನ್ನು ಶ್ರೇಷ್ಠ ಕಾವ್ಯದ ಮಟ್ಟಕ್ಕೆ ತಲುಪಿಸಿವೆ ಎಂದರು. ಇವರು ವಿವರಿಸಿದ ಎಲ್ಲ ವಚನಗಳ ಸಾಲುಗಳನ್ನು ಮಲೆಯಾಳಿಗೆ ಪ್ರಸನ್ನ ಕುಮಾರ ಅನುವಾದಿಸಿದರು. ನಂತರ ಸಂವಾದ ಕಾರ್ಯಕ್ರಮದಲ್ಲಿ ಅನೇಕರಿಗೆ ಪ್ರೊ. ಯಾಪಲಪರವಿ ಉತ್ತರಿಸಿದರು. ಬಸವ ಪಥ ಚರ್ಚೆಗೆ ಭಾಷೆ ಅಡ್ಡಗೋಡೆಯಾಗದಿದ್ದದು ವಿಶೇಷ. ಕೇರಳ ಸರಕಾರದ ಗ್ರಾಮೀಣ ಇಲಾಖೆಯ ಸಲಹೆಗಾರ ಪ್ರೊ. ಎ.ಆರ್. ಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಕೇರಳ ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂತ್ರಿಗಳನ್ನು, ಚಿಂತಕ ಯಾಪಲಪರವಿ ಅವರನ್ನು ಅಭಿನಂದಿಸಿದರು. ರಾಜ್ಯ ವೀರಶೈವ ಮಹಾಸಭಾದ ಅಧ್ಯಕ್ಷ ಕುಂಜುಮನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳದಲ್ಲಿ ಬಸವ ತತ್ವಮನೆಮನೆಯಲ್ಲಿ ಬೆಳಗುತ್ತದೆ.ಸರಕಾರ ಕೂಡಾ ಕಾಯಕ ದಿನದಲ್ಲಿ ಪಾಲ್ಗೊಂಡಿರುವುದು ಲಿಂಗಾಯತ ಧರ್ಮಕ್ಕಿರುವ ಸಾಮರ್ಥ್ಯವನ್ನು ತೋರುತ್ತದೆ ಎಂದರು. ಬಸವ ಸಮಿತಿಯ ಅರವಿಂದ ಜತ್ತಿ ಅನೇಕ ಉಪಯುಕ್ತ ಗ್ರಂಥಗಳನ್ನು ನಮ್ಮ ಭಾಷೆಗೆ ಪರಿಚಯಿಸಿ, ಶ್ರೇಷ್ಠ ತಜ್ಞರನ್ನು ನಾಡಿಗೆ ಕಳಿಸುತ್ತಿರುವುದು ಅಭಿನಂದನೀಯ ಎಂದರು. ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಶೋಭನಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಿರುವಂನಂತಪುರದ ಅಧ್ಯಕ್ಷ ಕೆ.ಎನ್.ಪಿಳೈ, ಕೇರಳಾಧ್ಯಕ್ಷ ಟಿ.ವಿ. ಶಶಿಕುಮಾರ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಲಿಂಗಾಯತ ಧರ್ಮದ ವಿವಿಧ ಆಯಾಮಗಳ ಕುರಿತು ನಂತರ ಚರ್ಚಿಸಲಾಯಿತು.
ವರದಿ-ಪ್ರಸನ್ನಕುಮಾರ
ತ್ರಿಸ್ಸೂರ ಬಸವ ಸಮಿತಿ ಕಾರ್ಯಕ್ರಮ
ಬಸವ ಸಮಿತಿಯ ಚೇತನದಂತಿರುವ ಪ್ರಸನ್ನ ಕುಮಾರ ವೃತ್ತಿಯಿಂದ ಉದ್ಯಮಿ 'Glow hot' ಎಂಬ ಗೃಹ ಬಳಕೆ ವಸ್ತುಗಳ ಉದ್ಯಮ ಇಟ್ಟುಕೊಂಡು ನೂರಾರು ಜನಯುವಕರಿಗೆ ಉದ್ಯೋಗ ನೀಡಿ, ತಾವು ತೃಪ್ತಿಯಿಂದ ಇದ್ದಾರೆ. ಕಾಯಕ-ದಾಸೋಹದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪ್ರಸನ್ನ ಕುಮಾರ ತ್ರಿರುವಳ್ಳಿ ಹತ್ತಿರದ ತೆಂಗಿಲ್ ನವರು. ಬಿ.ಎ. ಪದವೀಧರ, 46 ವರ್ಷದ ಪ್ರಸನ್ನಕುಮಾರ ಬಸವ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ವ್ಯಾಪಕವಾಗಿ ಕೇರಳದಲ್ಲಿ ಪರಿಚಯಿಸಿದ್ದಾರೆ. ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ಲಿಂಗಾಯತ ಧರ್ಮದ ಬಗ್ಗೆ confusion ಗಳಿವೆ. ಇತ್ತೀಚಿಗೆ ಹಂತ ಹಂತವಾಗಿ ಕೇರಳದ ಲಿಂಗಾಯತರು ಬಸವಣ್ಣನ ಮೌಲ್ಯಗಳನ್ನು ಗ್ರಹಿಸುತ್ತಲಿದ್ದಾರೆ.
ಲಿಂಗಾಯತ ಧರ್ಮವನ್ನು ಅರಿಯುವ, ಆಚರಿಸುವ ವಿವಿಧ ಹಂತಗಳನ್ನು ವಿವರಿಸುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದರು. ಕಾಯಕ-ದಾಸೋಹ-ಏಕದೇವೋಪಾಸನೆ ನಮ್ಮ ಎದುರಿಗಿರುವ ಸವಾಲುಗಳು. ಹೇಗೋ ಕಷ್ಟ ಪಟ್ಟು ಕಾಯಕ-ದಾಸೋಹಗಳನ್ನು ರೂಢಿಸಿಕೊಳ್ಳಬಹುದು. ಆದರೆ ಏಕದೇವೋಪಾಸನೆ ಸುಲಭದ ಮಾತಲ್ಲ. ಭಯ-ಭಕ್ತಿ ಎಂತಲೇ ಹಲವು ದೇವರುಗಳ ಬೆನ್ನು ಹತ್ತಿರುವ ನಮ್ಮನ್ನು ಏಕದೇವೋಪಾಸನೆ ಇಷ್ಟಲಿಂಗ ಆರಾಧನೆಗೆಸುಲಭದ ಮಾತಲ್ಲ. ಅಂದು ಬಸವಾದಿ ಶರಣರು, ಅನುಭವ ಮಂಟಪದ ಮೂಲಕ ನಿರಂತರ ಜ್ಞಾನ ನೀಡಿ, ವಚನಗಳ ರಚನೆಯ ಮೂಲಕ ಜನರನ್ನು ಸಂಘಟಿಸಿದ್ದು ಸಾಮಾನ್ಯ ಸಂಗತಿಯಲ್ಲ.
ಇಂತಹ ವೈಜ್ಞಾನಿಕ ಯುಗದಲ್ಲಿಯೂ ಜನ ದೇವರು-ಧರ್ಮದ ಹೆಸರಿನಲ್ಲಿ ಹುಚ್ಚರಂತೆ ವರ್ತಿಸುವುದನ್ನು ಕಂಡರೆ ಅಚ್ಚರಿ ಎಕೇರಳನಿಸುವುದು.ನೂರಾರು ದೇವರ ಆರಾಧನೆಯಿಂದ - ಶಿವನ ಆರಾಧನೆಯೇ ಶ್ರೇಷ್ಠ, ಶಿವನೇ ಶ್ರೇಷ್ಠ ಎಂದು ಬಿಂಬಿಸುವ ಶಿವಪುರಾಣ ಲಿಂಗಾಯತರನ್ನು ಪ್ರಾಥಮಿಕ ಹಂತಕ್ಕೆ ತರುವ ಕೆಲಸ.
ಕಪೋಲ ಕಲ್ಪಿತ ಶಿವನಿಗಿಂತ ಶರಣರು ನೀಡಿದ ಇಷ್ಟಲಿಂಗ ಆರಾಧನೆಯನ್ನು ರೂಢಿಸಿಕೊಂಡು, ಗುಡಿ-ಗುಂಡಾರಗಳ ಹಂಗನ್ನು ತೊರೆದು ಆತ್ಮವಿಶ್ವಸವನ್ನು ಬೆಳೆಸಿಕೊಳ್ಳುವುದು ಲಿಂಗಾಯತ ಧರ್ಮದ ಪದವಿ ಪಡೆದ ಹಾಗೆ. ಈ ಪದವಿಯ ಹಂತದಲ್ಲಿರುವವರು, ಗುಡಿಗಳಿಗೂ ಹೋಗುತ್ತಾರೆ. ಲಿಂಗವನ್ನು ಧರಿಸಿ confusion ನಲ್ಲಿರುತ್ತಾರೆ. ಪೂರ್ಣ ಪ್ರಮಾಣದ ಲಿಂಗ ಆರಾಧನೆಯ ಮೂಲಕ ಏಕಾಗ್ರತೆ, ಮನೋನಿಗ್ರಹ, ಧ್ಯಾನದ ಮೂಲಗಳನ್ನು ಹಿಡಿಯುವುದು ವಿಕಸನದ ಸಂಕೇತವಾಗುತ್ತದೆ. ಇಷ್ಟಲಿಂಗದ ಆರಾಧನೆ ಪ್ರಭುತ್ವದ ಸಂಕೇತವಾಗಿ ಶುದ್ಧ ಲಿಂಗಾಯತರಾಗಲು ಸಾಧ್ಯ.
ಕೆಲವರು ಗುಡಿ - ಗುಂಡಾರಗಳನ್ನು ನಿರಾಕರಿಸಿ ಏಕದೇವೋಪಾಸಕರಾಗಿ ಲಿಂಗ ನಿಷ್ಠೆಯನ್ನು ರೂಪಿಸಿಕೊಂಡರೂ ಮನದ ಕೊಳೆಯನ್ನು ಪೂರ್ಣವಾಗಿ ತೊಳೆದುಕೊಳ್ಳದೇ ಅಹಂಕಾರಿಗಳಾಗಿರುತ್ತೇವೆ. ಮನದ ಮುಂದಣ ಆಸೆ, ಒಳಗಿನ ಮನದ ಕೊಳೆಯನ್ನು ನಿವಾರಿಸಿ ಪೂರ್ಣ ಪ್ರಮಾಣದ personality ಆಗಲು ಬಸವ ಪ್ರಜ್ಞೆ, ಬಸವಾದಿ ಶರಣರ ವಚನಗಳು ನೆರವಾಗುತ್ತವೆ ಎಂಬ ಸತ್ಯವನ್ನು ಲಿಂಗಾಯತರು ಅಥವಾ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು ಆಳವಾಗಿ ಅರಿತು ಸ್ವೀಕರಿಸಬೇಕಿದೆ. ಈ ವಿಷಯದಲ್ಲಿ ಮಠಾಧೀಶರಿಗೆ ಅನೇಕ ಗೊಂದಲಗಳಿವೆ.
ಬಸವ ಪ್ರಜ್ಞೆಯಿಲ್ಲದೇ ಕೇವಲ ಯಾವುದೋ ಒಂದು ಸೂತ್ರ ಹಿಡಿದು ಬಡಿದಾಡುತ್ತಾರೆ. 'Total Basava consciousness will develop our personality' ಎಂಬ ವಾದ ಈಗ ಜಗದ ತುಂಬೆಲ್ಲ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ ಗೆಳೆಯರಾದ ರಂಜನ್ ದರ್ಗಾ ಅವರ 'ಬಸವ ಪ್ರಜ್ಞೆ' ಹೆಚ್ಚು ಪ್ರಸ್ತುತ ಈ ಎಲ್ಲ ಹಂತಗಳನ್ನು ಅರ್ಥಪೂರ್ಣವಾಗಿ ಗ್ರಹಿಕೆ ಬಸವ ಪ್ರಜ್ಞೆಯನ್ನು ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಂದಾಗ ನಾವು ನಿಜವಾದ ಬಸವ ತತ್ವ ಅನುಯಾಯಿಗಳು. ಇಂದು ಈ ಕೆಲಸ ಅಂತರಾಷ್ಟ್ರೀಯ ಮಟ್ಟದಲ್ಲಿ, ಹೊರರಾಜ್ಯಗಳಲ್ಲಿ ನಡೆದಿದೆ ಎನ್ನುವುದಕ್ಕೆ ಅದ್ಧೂರಿ ಬಸವ ಜಯಂತಿಯ ಆಚರಣೆಗಳೇ ಸಾಕ್ಷಿ! Now the globe realiged Basava consciousness.
ಕೇರಳದ ಗೆಳೆಯ ಪ್ರಸನ್ನ ಕುಮಾರ ಅಂತಹ ಸಾಹಸಕ್ಕೆ ಕೈ ಹಾಕಿ ನನ್ನಿಂದ ಬಸವ ಪ್ರಜ್ಞೆಯ ಕುರಿತು ಒಂದುತಾಸು ವಚನಗಳ ಉದಾಹರಣೆಗಳೊಂದಿಗೆ ಮಾತನಾಡಿಸಿ ತಾವೇ ಮಲೆಯಾಳಿಗೆ ತರ್ಜುಮೆ ಮಾಡಿದರು. ಸಭೆಯಲ್ಲಿ ಪಾಲ್ಗೊಂಡ ನೂರಾರು ಬಸವಾಭಿಮಾನಿಗಳು, ಬಸವ ತತ್ವ ಆಚರಣೆಯಲ್ಲಿ ತಾವು ಯಾವ ಹಂತದಲ್ಲಿದ್ದೇವೆ ಎಂದು ಒರೆಗಲ್ಲಿಗೆ ಹಚ್ಚಲು ಈ ಸಂವಾದ ನೆರವಾಯಿತು. ಬಸವ ಪ್ರಜ್ಞೆಯ ಪದವಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಹಂತಗಳನ್ನು ನಾವು ತಲುಪುವ ಬಗೆಯನ್ನು ಅರ್ಥಪೂರ್ಣವಾಗಿ ಚರ್ಚಿಸಿದರು. ಈ ಹಂತವನ್ನು ತಲುಪುತ್ತೇವೆಯೋ, ಇಲ್ಲವೋ ಆ ಮಾತು ಬೇರೆ ಆದರೆ Self evaluation ಮೂಲಕ ನಾವು ಪಡೆದಿರುವ ಅಂಕಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನನ್ನ ಕೇರಳ ಭೇಟಿ ಸಾರ್ಥಕವಾಯಿತು. ಕಾರಣರಾದ ಅರವಿಂದ ಜತ್ತಿ ಹಾಗೂ ಪ್ರಸನ್ನಕುಮಾರ ಅವರಿಗೆ ಋಣಿಯಾಗಿದ್ದೇನೆ.
Subscribe to:
Posts (Atom)